ಕುಸುಮ ಬಾಲೆ

ವನಸುಮವಿಂದು ಧನ್ಯ.. ನಿನ್ನ ಪಾದಗಳಡಿ ಪವಡಿಸಿ.. 
ಪರಿಮಳವ ಪಸರಿಸಿ ಪರಾಗವಾಗಿ ಪಯಣಿಪ ಘಳಿಗೆಯಲಿ ಪದುಮಪಾದಗಳ ಪೂಸುವ ಪೂಜ್ಯಭಾವತಳೆದು ಪುಣ್ಯಪಡೆಯೆ ವೃಕ್ಷವಕ್ಷವನಲಕ್ಷಿಸಿ ನಿನ್ನ ದಾರಿಯನಪ್ಪಿರಲು

ಕುಸುಮ ದಳಗಳ ನಡುವೆ ನಡೆವ ನಿನ್ನ ನಡೆನಾಟ್ಯ 
ನವಿರಾದ ನೀಳಕೇಶರಾಶಿಗಳ ನಡುವೆ ಮರೆಯಾದ ನೀಲಾಕಾಶ, ಸುಂದರ ಶುಭ್ರ ಶ್ವೇತ ವಸ್ತ್ರಭೂಷಿತೆ ಸಿರಿಸರಸತಿಯು ಕಮಲಸಂಭವೆಯಾಗಿ ನಡೆವ ದೃಷ್ಯ ಸಾದೃಷವಾದ ಕ್ಷಣವಿದು..

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು