ಹಣತೆಯಾಗುವ

ಅಳಿಯುವುದು ಆಂಧಕಾರದ ಅವಧಿ ಬೆಳಕಿನಲಿ
ಅಪರಿಮಿತವೀ ಬೆಳಕಿನ ಪರಿಧಿ ಅಂಧ ಅಮಲಿನಲಿ
ಕಾರಿರುಳ ಕವಲಿನಲಿ ಅಲ್ಪವೀ ಹಣತೆಯ ಅವಧಿ
ಬೆಳಗುವ ಬಯಕೆಯೊಂದೇ ಬದುಕ ಭರವಸೆಗೆ ಬುನಾದಿ

ಕತ್ತಲೆಯ ಕರಿ ಛಾಯೆಯೊಳ ಬೆಳದಿಂಗಳು ಮೌನವಾಗಿರೆ
ಬೆಳಗ ಬಣ್ಣನೆಯ ಮೊದಲಿಸಿರೆ ಬೆಳಗೆಂದೂ ಕತ್ತಲಲ್ಲೊ ಕಾಣ
ಬರಿಯ ಬೆಳಗ ಬಣ್ಣದಲಿ ಮೈಮರೆಯದೇ ಇರುಳಿಗಣಿವಾವನೇ ಜಾಣ

ಅರಿವಿಗೆ ಅಕ್ಷಿಪಟಲಪರಿಧಿಯ ಮಿತಿಯನೇ ಅಳತೆಗೋಲಾಗಿಸಿ
ಮಿತಿಯ ಮೀರಿ ಮೀಯವುದೀ ನಾಲಿಗೆ ಪರವಿಷಯದೆಂಜಲಲಿ
ತೋಯಬಾರದೇಕೆ ಜೀವ ಪ್ರಬುದ್ಧ ಬತ್ತಿಯಂತೆ ಸದ್ಗುಣದೆಣ್ಣೆಯಲಿ
ಜ್ಞಾನವೆಂಬ ಬೆಳಕಹೊತ್ತಿಸಿ ಅಜ್ಞಾನವೆಂಬಂಧಕಾರವನೀಗೆ...

📝NPK...

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು