ಸೂತ್ರಧಾರನೀತ
ಜಗದ ಸೂತ್ರಧಾರನೀತ ಜಗದಣುರೇಣುತೃಣಗಳ ತೆಕ್ಕೆಯಲ್ಲಿರಿಸಿ ತಕ್ಕವರಿಗೆ ತೊಡುವಪಾತ್ರವನಿತ್ತು ಮಿಕ್ಕವರ ನಕ್ಕುನಲಿಸಿ ಹಕ್ಕಿನಲೆಕ್ಕವಬರೆದು ಅಳೆದುತೂಗಿ ಕೂಡಿಕಳೆದು
ತಾ ಕೊಟ್ಟ ಪಾತ್ರವ ಪಕ್ವಗೊಳಿಸೆ ಪಕ್ಕದಲಿದ್ದು ಪರಿಪಾಲಿಪನು
ಪಾತ್ರವ ಪೂರ್ಣಗೊಳಿಸಲು ಪಾಪಕರ್ಮಗಳರಹುವ ಪರಮದಯಾಪರನು ಪಾಪಪುಣ್ಯಗಳ ಗೊಡವೆಯಲ್ಲಿ ಗುರುವಕಾಣಿಸಿ
ಗುಣದಿ ಗೊಂದಲವಗುಡಿಸಲಣವಾಗುವನು ಜಗದೋದ್ಧಾರನು...
ರಂಗಿನ ರಂಗಮಂದಿರದೆ ರಂಗನ ಕೈಗೊಂಬೆಗಳು ನಾವು. ಕೈಗೊಂಬೆಗಳು..
📝NPK...

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ