ಬಾಳ ಬಂಡಿ

ಕಳೆದ ದಿನಗಳ ನೆನೆದು ಕೊರಗಿ
ಬರುವ ನಾಳೆಯ ತುಳಿದು ತೊರೆದು
ಕೂಡಿ ಕಳೆದಿಹ ಕಾಲನ ಶಪಿಸಿ
ಕಾಲಕಳೆಯುವ ಮೂರ್ಖರೇ..

ಬಾಳ ಬಂಡಿಯ ಬಯಲ ಪಯಣಕೆ
ಆತ್ಮ ಬಲದ ನೊಗವ ಕಟ್ಟಿ
ಸತ್ಯ ಧರ್ಮದ ಎತ್ತ ಹೂಡಿ
ನ್ಯಾಯ ನೀತಿಯ ಕುಣಿಕೆ ಬಿಗಿದು
ಯುಕ್ತಿ ಎಂಬ ಚಾಟಿ ಬೀಸಿ
ದಿಗಿಲುತನವನು ದೂರ ಅಟ್ಟಿ
ಧೈರ್ಯದಿಂದ ಮುಂದೆ ನುಗ್ಗಿ

ಬಂಡಿ ನಡೆಯೆ ದೂರ ದೂರ
ತಿರುವು ಉಬ್ಬಿನ ದಾರಿ ನೂರು
ಹಳ್ಳದಿಣ್ಣೆ ಕಲ್ಲಹಾದಿ
ತೋರಲಿಹುದು ನಿನ್ನ ಗಾದಿ
ನಿನ್ನ ಬಲವೇ ನಿನ್ನ ಬದುಕಿಗೆ ಬುನಾದಿ

NPK..

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು