ಜೀವನದಿ ಜೊತೆಗಾರರು

ತನುವಿನ ತಾಳಲಸಾಧ್ಯ ನೋವಮರೆತು
ಒಡಲೊಳು ಅಗಾಧ ಪ್ರೇಮವ ತುಂಬಿ
ನವಮಾಸ ನಯವಾಗಿ ಸಲಹಿ
ಹಾಲ್ಗೆನ್ನೆಯ ಹಸುಳೆಯ ಹಡೆವ ತಾಯಿ

ಬದುಕ ಬಂಡಿಗೆ ಭುಜವ ನೀಡಿ
ಮನದ ಬಯಕೆಯ ಬದಿಗೆ ತಳ್ಳಿ
ಬಾಳಯಾನಕೆ ಭಾಷ್ಯ ಬರೆವ ತಂದೆ

ಭುವಿಗೆ ಬರುತಿರೆ ಎದೆಗವಚಿ ಮುದ್ದಾಡಿ
ಹೆಸರ ಹೆಸರಿಸಿ ಹೊಸ ಉಸಿರಿಗೆ ಹಸಿರಾಗುವ
ಬಂಧವರಿತು ಬರುವ ಬಂಧು ಬಾಂಧವರು

ಗುರಿಯನರುಹಿ ಗುರಿಯ ಕಲಿಸಿ
ಗರಿಮೆಯ ಗರಿಯ ಪಡೆಯಲು ದಾರಿಯಾಗಿ
ಗುರಿಸಾಧಿಸೆ ನೆರವಾಗುವ ಗುರು ಹಿರಿಯರು

ಸ್ನೇಹ ಪ್ರಿತಿಗಳ ಸಂಬಂಧದೊಡಗೂಡಿ
ನಡೆವ ಗೆಳೆಯರೊಡನೆಯ ಬಾಳ ಪಯಣದಿ
ಸೌಗಂಧವನ್ನೇ ಬೀರುವ ಹೂವೆಷ್ಟೋ,
ಸಿಹಿಯನ್ನೇ ನೀಡುವ ಮಧುವೆಷ್ಟೋ...
ಅದರಲ್ಲೂ ಇರಲೇಬೇಕಲ್ಲ ಧುರ್ಗಂಧವನು ನೀಡುವ ಹೂವು..
ಕಹಿಯೂ,ನೋವುಗಳು,ಹತಾಷೆ, ಮಧುರ ನೆನಪುಗಳು...
ಹೌದು,
ಹುಡುಕುವ ದಾರಿಯಲ್ಲೇ ನಡೆದಿದ್ದೇವೆ ಈ ಬಾಳ ಪಯಣದಿ....

✒NPK..

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು