ಸಹಯೋಗ

ಸಹನೆಯ ಸಹಯೋಗ ಮೌನದಲ್ಲಿ
ತಾಳ್ಮೆಯ ತಳುಕು ಕ್ಷಮೆಯಲ್ಲಿ
ಮೌನವು ಮಾತಿನ ಮಿತಿಯನರಿತರೆ
ಸಹನೆಯು ಕ್ರೌರ್ಯದ ಕೆಡುಕನರಿತಿದೆ
ವಂಚನೆಯ ಎಲ್ಲೆಯವರೆಗೆ ಮಾತ್ರ ತಾಳ್ಮೆಯ ತುಡಿತ
ತಪ್ಪಿಗೆ ಕ್ಷಮೆಯುಂಟು ಮೋಸಕ್ಕೆ ಕ್ಷಮೆಯಿಲ್ಲ
ನಂಬಿಕೆ, ಸಂಯಮವೆಲ್ಲ ಸಹಬಾಳ್ವೆಗಾಗಿ
ಉಳಿದೆಲ್ಲವೂ ಪ್ರೀತಿ, ಸ್ನೇಹ, ಸಂಬಂಧಗಳಿಗಾಗಿ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು