#ವೃಕ್ಷಕ್ಕೆ_ಜ್ಞಾನೋದಯ

#ವೃಕ್ಷಕ್ಕೆ_ಜ್ಞಾನೋದಯ.

ಚಲನೆಯಿಲ್ಲದೆ  ಸ್ಥಿರವಾಗಿವಾಗಿರುವೆ ಎಂತೆನಿಸುತಿದೆ ವೃಕ್ಷಕ್ಕೆ. 
ಏಕೋ ಲೋಕದಲಿ ಅಲೆವಮಲಿನಾಸೆ ಚಿಗೊರೊಡೆದಿದೆ
ಆಸೆಗಳು ಚಿಗುರಿದಂತೆ ಬೇರು ಬಿಳಲುಗಳು ನಿಂತಲ್ಲೇ ಭಿಗಿಗೊಳ್ಳುತಿವೆ

ಮರವಾದ ಜೀವ ತನ್ನ ಸ್ಥಿರತೆಯನೆನೆದು ತಾನೇ ರೋಧಿಸಿದೆ
ನಿಂತಲ್ಲೇ ನಿಂತು ಬೇಸರಿಸಿ ಬವಣೆಯ ಬೇಗೆಯಲಿ ಬೆಂದಿದೆ
ಓಡುವ ನಿರ್ಜೀವ ವಾಹನಗಳ ಕಂಡುದರಉರಿದಿದೆ

ನೆನ್ನೆಗಳ ತೆವಳುವ ಬಯಕೆ ಇಂದಿನ ನಡೆವಾಸೆಗೆ ಸ್ಪೂರ್ತಿ
ನಡೆಯಲು ಬಯಸುವ ಮನ ತೋರಿರಲು ನಾಳಿನ ಕರ್ತವ್ಯಗಳ ಸರತಿ ಬಹು ದೂರ ಸಾಗುವ ಮೋಹವೊಂದು ಮನದಲ್ಲೇ ಕಂಡಿತವನತಿ

ಇಂದೇಕೋ ನಿಂತ ನೆಲದಲ್ಲಿ ವೃಕ್ಷಕ್ಕೇ ಜ್ಞಾನೋದಯವಾಗಿದೆ
ಮರವಾಗಿ ನೆರವಾದುದಕ್ಕೆ ಸ್ವಯಂಪ್ರಶಂಸೆಗಿಳಿದಿದೆ
ಅಲೆದು ದಣಿದು ಬಂದ ಹಕ್ಕಿಗೆ ನೆಲೆನೀಡಿದೆ.

ಚೈತ್ರದಿ ಹೊಸ ಜೀವ ಕಳೆ ಪಡೆದು ನಲಿದಿದೆ
ದುಗುಡಗಳ ದೂರ ತಳ್ಳಿ ಕಾರ್ಮೋಡಗಳ ಇಳೆಗಿಳಿಸಿದೆ
ಬಿಸಿಲ ಬೇಗೆಯಲಿ ಬೆಂದ ಜೀವಜಂತುಗಳಿಗೆ ತಂಪನೆರೆದಿದೆ

ಜೀವಸಂಕುಲಕೆ ನೆರವಾಗಲು ಹಸಿರ ಉಸಿರಾಗಿಸಿದೆ
ನೆಲದ ನೀರು ಮಣ್ಣುಗಳ ಸಂಶ್ಲೇಶಿಸಿ ಹೂ ಹಣ್ಣುಗಳ ಸೃಜಿಸಿದೆ
ಅಲೆವಾಸೆಯ ತ್ಯಜಿಸಿ ಅಲೆವ ಜೀವಗಳಿಗೆ ನೆಲೆಯಾಗಿದೆ.

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು