ಪ್ರತಿ ವ್ಯಾಪಾರ
ಪ್ರೀತಿಸಿಯೂ ಅವಳು ನನಗೆ ಸಿಗಲಿಲ್ಲ
ಹಾಗೆಂದು ಯಾರೂ ಮೋಸಹೋಗಲಿಲ್ಲ
ಒಲವಿನಕುಲುಮೆಯಲಿ ಬೆಂದರೂ
ಹಸನಾಗಲು ಸಾಧ್ಯವಾಗದ ಪ್ರೀತಿ
ಅರೆಹಸನಾಗಿರಲು ನೀರಿಗದ್ದಲ್ಪಟ್ಟಿತ್ತು...
ನಮ್ಮಿಬ್ಬರ ಹೃದಯಗಳು ಪರಸ್ಪರ ಬದಲಿಸಲ್ಪಟ್ಟಿತ್ತು
ಸಿಹಿ ಚುಂಬನಗಳ ಲೇವಾದೇವಿ ವ್ಯವಹಾರ ಜೋರಾಗಿಯೇ ಇತ್ತು..
ನನಗೆ ಗೊತ್ತು ಕೊಟ್ಟಷ್ಟೂ ಕರಗದ ಪಡೆದಷ್ಟೂ ಮುಗಿಯದ ಸಂಪತ್ತು ಈ ಸಿಹಿಮುತ್ತು.
ಅದೇಕೆ ಸಾಲದ ಹೊರೆಯನ್ನು ಹೊರಲಾರದಾದೆ-ಕಣ್ಣಮುಂದಿರದೆ ಊರಬಿಟ್ಟುನಡೆದೆ...
ನನ್ನ ಹೃದಯವಿನ್ನೂ ನಿನ್ನಲ್ಲೇಇದೆ ಹಿಂದಿರುಗಿಸುವೆಯೋ ಬಿಡುವೆಯೋ.. ನೀನೇ ಹೇಳು.
ನಾನಂತೂ ನಿನ್ನ ಹುಡುಕಿ ವಸೂಲಿ ಮಾಡಲಾರೆ.. ಸಾಲಕೊಟ್ಚ ನನ್ನ ವಿಳಾಸ ನಿನಗೆ ತಿಳಿದೇ ಇದೆ..
📝NPK...

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ