ನಮ್ಮವರೆಂಬ ಚುಕ್ಕಿಗಳು

ಚುಕ್ಕಿಗಳ ಚಿತ್ತಾರವ ಕಂಡು ಪೂರ್ವಜರ ನೆನೆವ ನಾವು,
ಮತ್ತೆ ಕಾಣಲಾಗದ ಅವರನ್ನು ಕಂಡಷ್ಟು ಪುಳಕಿತರಾಗುತ್ತೇವೆ..
ಅವರ ನೆನಹುಗಳ ಬುತ್ತಿಯ ಬಿಚ್ಚಿ ಬೆಳದಿಂಗಳೂಟವ ಸವಿಯುತ್ತೇವೆ..

ಚಂದದ ಚುಕ್ಕಿಗಳ ಸಾಲಿನಲ್ಲಿ ನಮ್ಮವರನ್ನು ಹುಡುಕುವ ನಾವು,
ಪೀಳಿಗೆಯ ಪರಿಮಳವ ಪಸರಿಸುತ್ತೇವೆ..
ನಂಬಿಕೆಯಂತೆ ಮುಂದೊಂದು ದಿನ ಚುಕ್ಕಿಗಳಾಗುವ ನಾವು,
ನಮ್ಮವರು ಹುಡುಕುವ ನೆನಪುಗಳಾಗಿ ಉಳಿಯುತ್ತೇವೆ...

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು