ಕ್ರಾಂತಿವೀರ ಭಗತ್

ನಭದ ಸೂರ್ಯನ ಕಾಂತಿಯ ಮೀರಿತ್ತು ನಿಮ್ಮ ಕ್ರಾಂತಿ ಜ್ವಾಲೆ
ಮಾತೃಭೂಮಿಯ ದಾಸ್ಯತೊಲಗಿಸೊ ಮಂತ್ರಜಪಿಸಿದಿರಿ
ಪರಕೀಯರ ಅಟ್ಟಹಾಸವ ಸುಟ್ಟು ಹಾಕಲು ಸೆಣೆಸಿದಿರಿ
ಲಕ್ಷ ಹೃದಯಕೆ ಬಂಧಮುಕ್ತಿಯ ಬೀಜ ಬಿತ್ತಿದಿರಿ
ಶತ್ರು ಎದೆಯಲಿ ಶಕ್ತಿಹೀನರ ಭಾವ ಬೆಳೆಸಿದಿರಿ
ಆಳುವ ಅಧಿಕಾರವಿರದ ವಿರೋಧಿಯ ಮಧಿಸಿದಿರಿ
ನೆತ್ತರ ಹರಿಸಿದವರನೆದುರಿಸಿ ಪ್ರತೀಕಾರ ಪಡೆದಿರಿ
ರಾಜಗುರು ಸುಖದೇವರೊಡನೆ ದೇಶಕೆಕ್ರಾಂತಿಬೆಳಕ ಚಲ್ಲಿ
ಮೋಸದುರುಳಿಗೆ ಮಂದಹಾಸದಿ ಕೊರಳ ಒಡ್ಡಿದಿರಿ
ನಿಜ ಹಲವು ರತ್ನಗಳ ಹಡೆದಾಕೆ ಈ ತಾಯಿ ಭಾರತಿ
ನಿಮ್ಮ ನೆನಪು ಆಚಂದ್ರಾರ್ಕ..
ಇಂಕ್ವಿಲಾಬ್ ಜಿಂದಾಬಾದ್... ವಂದೇ ಮಾತರಂ 🙏

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು