ಬೀಗಬಂಧಿ

ನಿನ್ನ ಗೆಜ್ಜೆಯ ನಾದದ ಘಮಲು ನೀ ಕೊಟ್ಟ ಉಡುಗೊರೆಗೆ
ನನ್ನ ವಾಹನದ ಚಾವಿಯ ಮಾಲಿಕಳು ನೀನೀಗ.

ನೀ ಕೊಟ್ಟ ಬೀಗಬಂಧಿ ನಿನ್ನ ಇರುವಿಕೆಯ ವ್ಯಕ್ತಪಡಿಸಿದೆ
ಹೆಜ್ಜೆ ಹೆಜ್ಜೆಗೂ ನಿನ್ನ ಗೆಜ್ಜೆಯ ದನಿಯ ನೆನಪಿಸಿದೆ
ನನ್ನೊಳು ನೀ ನಾನಾಗಿ ಇರುವಂತೆ ತೋರಿದೆ.

ನನ್ನ ಪ್ರತೀ ಪಯಣದಿ ನೀ ನನ್ನೊಂದಿಗೆ
ಅಸ್ತವ್ಯಸ್ತ ರಸ್ತಯ ಗುಂಡಿಯನಿಳಿಯದಂತೆ ಎಚ್ಚರಿಸುವೆ
ತಂಗಾಳಿಯ ಕಂಪಿನಲಿ ತಣ್ಣನೆಯ ಸಣ್ಣ ಕಂಪನವತೋರಿರುವೆ.

ಸಿಹಿ ನೆನಪುಗಳ ರಾಯಭಾರಿ ಈ ನಿನ್ನ ಬೀಗಬಂಧಿ
ಶೀಘ್ರ ದಲ್ಲಿ ನೀನಾಗುಬಾರದೇ ನನ್ನ ತೋಳಿನಲಿ ಬಂಧಿ...

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು