ಅವನಿ

ಸಿರಿ ಅವನಿಯ ಮಡಿಲಿಗೆ ಈ ಸೊಬಗತಂದವರಾರು
ಭವ್ಯ ಬೆಟ್ಟಗಳ ಸಾಲಿಗೆ ಜಲಪಾತವನಿರಿಸಿದವರಾರು
ಪ್ರತೀ ಬೀಜದ ನೆತ್ತಿಗೆ ಮೊಳೆಯುವ ಗುಣವಿಟ್ಟವರಾರು
ಜೀವರಾಶಿಗಳಿಗೆಲ್ಲಾ ಚಲನೆಯಕಲಿಸಿದವರಾರು
ಅಣು ಅಣುವಿನಲ್ಲೂ ಅನ್ನವನಿತ್ತವನಾರು
ಅವನಾರು ಅವನಾರೀ ಅವನಿಯ ಜನಕನು

ಕಪ್ಪಿಟ್ಟವನು ಬಿಳುಪನ್ನೂ ಇಟ್ಟನು
ಬಿಳುಪಿನಲಿ ಮತ್ತೇಳುಬಣ್ಣವನೂ
ಇತ್ತವನಿವನು ಕಾಣುವುದೊಂದು ಅದರ ಅಡಕ ಹಲವು
ಬದುಕಲ್ಲೂ ಭಾವಗಳಿಗೆ ಬಣ್ಣವನಿಟ್ಟು
ಬಣ್ಣ ವಲ್ಲದ ಬಣ್ಣವ ಸೃಜಿಸುವ ಕಲಾಜನಕನಿವನು
ಜಗಕೆ ಬಣ್ಣವನಿಟ್ಟು ಜೀವಿಗೂ ಬಣ್ಣವನಿತ್ತು
ಸರ್ವರೂ ಸಮಾನರೆಂದವನು
ಅವನಾರು ಅವನಾರೀ ಅವನಿಯ ಜನಕನು

ಸುಖ ದುಃಖ ಗಳ ಸೃಜಿಸಿದವನು
ಲಾಭ ಅಲಾಭ ಗಳ ಅರಹುವವನು
ಒಳಿತು ಕೆಡುಕುಗಳ ಹೊರ-ಒಳಹನ್ನು ಬಲ್ಲವನು
ಬಲ್ಲವರ ಬಾರದವರ ಭಾವಗಳಲಿ ಬೆಸೆದವನು
ಪ್ರೀತಿ ದ್ವೇಷ ಮೋಸ ಅಸೂಯೆಹಳಿದ್ದರೂ
ಜಗವನ್ನು ಶಾಂತಿಯಿಂದ ಮುನ್ನಡೆಸುತಿರುವವನು
ಅವನಾರು ಅವನಾರೀ ಅವನಿಯ ಜನಕನು

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು