ಅವಳೆಂಬ ಆಲ
ಕಾಲನೆಂಬ ಗಡಿಯಾರವ ಕೈಗೆ ಕಟ್ಟಿಕೊಂಡು!
ತಿರುಗುವ ಭೂಮಿಯನ್ನು ಪರಿಭ್ರಮಿಸುವ ಮುಳ್ಳುಗಳು,
ಅದನ್ನೇ ಹಿಂಬಾಲಿಸುವ ಜೀವನ.
ಬರುವ ನಾಳೆಗಳ ನೆನೆದು ದಿಗಿಲುಗೊಳ್ಳುವ ಮನ..
ಪ್ರಾಣದಂತಿರುವ ತಂದೆತಾಯಿ..
ಪ್ರಾಣಕ್ಕೆ ಪ್ರಾಣಕೊಡುವ ದೂರದೂರಿನ ಪ್ರಿಯಕರ.
ಜಗದ ಜಂಜಡಗಳ ತಲೆಯಮೇಲೇ ತೂಗಿಸುವ ಉದ್ಯೋಗ..
ನೋಡಬೇಕಾದ ನಾಳೆಯೆಂಬ ಕಾತರಕೆ ಅವಳೇ ಆಲದ ಹಾಗೆ ಬೇರು ಬಿಳಲುಗಳ ಬಲಪಡಿಸಿಕೊಳ್ಳಲು ಬಯಸುತಿಹಳು ಇಂದು..
📝NPK...

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ