ತನ್ಮಯನಾದೆ

ನಿನ್ನ ನೊಸಲಿಗೆ ನನ್ನುಸಿರು ತಾಕಿದಾಗ
ನನ್ನ ಬಾಚಿ ತಬ್ಬದಾ ದಿನ
ನನ್ನ ಬಾಳ ಬೇಗುದಿಗೆ ಅಮೃತ ವಾದ ಕ್ಷಣ

ಕಣ್ಣಿನಲಿ ಕಣ್ಣಿಟ್ಟ ತಣ್ಣನೆಯ ಅನುಭವ
ಎದೆಗವಚಿ ಮುಂಗುರುಳ ನೇವರಿಸಿ
ನೊಸಲಿಗೆ ಮುತ್ತನಿತ್ತ ಆನಂದದ ಭಾವ

ತೋಳ ಬಳಸಿ ನಡೆದ ನಡೆ
ಕೈ ಬೆರಳುಗಳ ಭಿಗಿಯಾಗಿ ಬಂಧಿಸಿ
ತುಂಟ ಮಾತುಗಳನಾಡಿ ನಲಿದ ಚಾರಣ

ಒಡನಾಡಿ ಒಲವತಂದು ಒಂದಾದೆ
ಪ್ರೇಮದ ಪ್ರತಿನಿಧಿಯಾಗಿ ಪ್ರೀತಿ ಬಯಸಿ ಪ್ರೀತನಾದೆ
ತನುವಿನಿಂದ ತನುವ ಬಳಸಿ ತನ್ಮಯನಾದೆ.

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು