ಮಾಯೆ
ಶೃಂಗಾರಹುಣ್ಣಿಮೆಯ ಸುಂದರ ಬೆಳಗೇ
ಜಲದ ನೈದಿಲೆಯ ಕಾವ್ಯದ ಸೊಬಗೇ
ಬೆಳದಿಂಗಳ ನಾಚಿಸುವ ನಿನ್ನ ಶುಭ್ರ ಸುಂದರ ಮೈಕಾಂತಿ
ದ್ವಿಗುಣಗೊಳಿಸಿತಲ್ಲ ಈ ಬನದ ಕಾಂತಿ.
ನಿನ್ನ ಬಳಸಬಂದ ನನಗೆ ತೋರಿದುದು ನಿನ್ನೈಸಿರಿಯ ನೆರಳ ಛಾಯೆ..
ಹೇಳು ಹೆಣ್ಣೇ ನೀನಲ್ಲವೇ ಮಾಯೆ..
ಸೋತ ಜೀವ ನೆರಳ ಹಿಂಬಾಲಿಸಲು ಪಡುತಲಿದೆ ನಾಚಿಕೆ.. ಏಕೆಂದರೆ ಗೊತ್ತು ನೀನೂಂದು ಮರೀಚಿಕೆ..
ಸ್ವಪ್ನ ಸುಂದರ ನೆರಳು ಬೆಳಕಿನಾಟ ನನಗೆ ಕಲಿಸಿದ ಪಾಠ..

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ