ಕಾಲ

ಕಾಲಕ್ಕೆ ತಕ್ಕಂತೆ ಬದಲಾಗಬೇಕಂತೆ
ಇದು ಕಾಲ ಕಲಿಸುವ ಪಾಠವಂತೆ
ನಿನ್ನೆಯವರೆಗೆ ನಮ್ಮದೆನಿಸಿಕೊಂಡಿದ್ದಿಂದು ನಮ್ಮದಲ್ಲ
ಬಹಳ ಬೇಕಾದವರು ಬೇಡವಾದರೂ ಆಶ್ಚರ್ಯವಿಲ್ಲ
ಸಮಯ ಕಳೆದಂತೆ ಸಮರಸದ ರಸವೇ ದೂರಾಗಿ
ಬಾಳಲಿ ಬರುವ ವಿರಸದ ನೀರಸ ಸಮರ
ಕಾಲನು ತನ್ನ ರಥದ ಚಕ್ರಕೆ ರಚಿಸಿಕೊಂಡ ಬೊಂಬೆಗಳು ನಾವು
ಕಾಲಚಕ್ರ ಉರುಳಿದಂತೆಲ್ಲ ಉರಳದೇ ವಿಧಿಯಿಲ್ಲ

✒NPK..

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು