ಪಾತರಗಿತ್ತಿ

ಜಗದ ಹೂಗಳಗಂಧವನೆಲ್ಲ ಪೂಸಲೆಂದು ಧರೆಗಿಳಿದ ಕಿನ್ನರಿ
ಕಾಡ ದುಂಬಿಗಳ ಪರಿವೆಯಿಲ್ಲದೆ ಕಾಡಿನಲೆವ ಸ್ವರ್ಗದೈಸಿರಿ
ಸುಗಂಧದೊಡನೆ ನಿನ್ನ ಸಂಗಮದ ಈ ನೋಟ ವಿಹಂಗಮ

ಪರಾಗ ಪರಮಾನಂದದ ಪರವಾನಗಿ ಪಡೆದ ಪಾತರಗಿತ್ತಿ
ಹೂಪಡಕಾನೆಯ ಪರಿಮಳದಿ ಪರಿಭ್ರಮಿಸಿ ರಮಿಸುತಿರುವೆ
ಮಕರಂದದ ಮಾದಕತೆಯಲಿ ಮುಳುಗಿ ಮರೆಯದಿರು ದೇವಲೋಕದದಾರಿ....

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು