ಮುಗಿಲ ಮೊಗ್ಗು

ನಭದ ತುಂಬು ಚಂದಿರ ಭಾವದಿ ಮುಗಿಲ ಮಲ್ಲಿಗೆಯಾದ ಘಳಿಗೆ
ಚಂದಮ ಪ್ರತೀ ಬಾರಿ ತುತ್ತಾಗಬಯಸುವೆ ಏಕೆ ನೀ ಈ ಭಾವಗಳಿಗೆ
ಇಂದಿನದಂತೂ ರಸಘಳಿಗೆ ನನ್ನೀ ಭಾವಗಳಿಗೆ

ಕಣ್ಣರಳಿಸಿ ಕಾದ ಹೂ ಅರಳಿ ಕಣ್ಣೆದುರೇ ಕೊನೆಯಾದಾಗ
ಭಾವದ ಬಂಧ ಮುಗಿಲ ಕಾಣಲು ಹಾತೊರೆಯುತಿತ್ತು
ಕೈಯಲ್ಲಿ ಅಳಿಯದೇ ಉಳಿದ ಅನುರಾಗದ ತೊಟ್ಟನು ನೀ ತೊಟ್ಟೆ
ತೊಟ್ಟನು ನೀ ತೊಟ್ಟ ಕ್ಷಣ ಮುಗಿಲ ಮಲ್ಲಿಗೆಯ ಮೊಗ್ಗಾಗಿ ಕಂಗೊಳಿಸಿದೆ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು