ಬದುಕು

ಬದುಕು ಬಂಧಗಳಿಂದಲೇ ಬಂಧಿತವಾದ ಬಂಧನ
ಭುವಿಗಿಳಿವಮೊದಲು ತಾಯರಕ್ಷೆಯಲಿ ನವಮಾಸಗಳಬಂಧನ
ಭವಿಗಿಳಿದು ಬರುತಲೇ ಸಂಬಂಧಗಳ ಬಂಧನ
ಬೆಳೆಯುತಲಿ ಸಾಮಾಜಿಕ ಕಟ್ಟುಪಾಡುಗಳ ಬಂಧನ
ಸ್ನೇಹ ಸಹಬಾಳ್ವೆ ಬಾಂಧವ್ಯಗಳ ಬಂಧನ
ಒಳಿತಿಗೆ ಪ್ರೀತಿಯದಾದರೆ ಕೆಡುಕಿಗೆ ಕಟ್ಟಳೆಗಳ ಬಂಧನ
ಕಲಿಕೆ ಕೆಲಸ ಕೌಶಲ್ಯದ ಕುರಿತಾಗಿ ಬಂಧನ
ವಯೋಮಾನದಲಿ ವಿವಾಹದ ಬಂಧನ
ಬಳಿಕ ಹೊಂದಾಣಿಕೆ ಹೊಣೆಗಾರಿಕೆಯ ಬಂಧನ
ಕೊನೆಗಲ್ಲಾಬಂಧಗಳ ಕಳಚಿ ಗೋರಿಯೊಳಗೆ ಬಂದೆ.... ನಾ...

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು