ಸುಳಿಯಬೇಡ

ಕಾಲವಂತೂ ಮೀರಿಹೋಯಿತು
ನೀ ನನ್ನ ಬಿಟ್ಟು ನಡೆದದ್ದಾಯಿತು
ನೆನಪಿನಂಗಳದಿ ಒಬ್ಬನೇ ನಿಂತು ಸಾಕಾಗಿದೆ ಗೆಳತಿ
ಪುನಃ ಕಣ್ಣ ಮುಂದೆ ಸುಳಿಯಬೇಡ
ನೆನಪುಗಳ ಸವೆಸಲು ಸಮಯ ಕೊಡು..

ತೋರಿದ ಪ್ರೀತಿ ಆರದ ಗಾಯವಾಗಿ ಗೋಳಿಡುತಿದೆ
ತೋರಿಕೆಯ ಪ್ರೀತಿಯಲ್ಲ ನನ್ನದು ತೋರಲಾಗದು ಬಗೆದು
ಹೃದಯವಿನ್ನೂ ರೋದಿಸುತಿದೆ ಬೇರಾವ ಹೃದಯವೂ ರುಚಿಸದೆ.
ಪುನಃ ಕಣ್ಣ ಮುಂದೆ ಸುಳಿಯಬೇಡ ಗೆಳತಿ
ನೆನಪುಗಳ ಸವೆಸಲು ಸಮಯ ಕೊಡು..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು