ಸೆರೆಹಿಡಿವ ತವಕ

ತಿಂಗಳಬೆಳಕ ತುಂಬು ಚಂದಿರ ಆಗಸದಂಗಳದಲ್ಲಿ
ಬೆಣ್ಣೆಯ ಉಂಡೆಯಂತೆ ತೋರುತಿಹನು
ಅದೆಷ್ಟೋ ಹಾಲ್ಗೆನ್ನೆಯ ತುಂಬುಗಲ್ಲದ ಕಂದಮ್ಮಗಳ
ಅನ್ನಪ್ರಾಶನಕೆ ಕಾರಣವಾಗುವ ಕಾರಣೀಭೂತನಲ್ಲವೇ ಇವನು..

ಈ ಹುಣ್ಣಿಮೆಯ ಹೊನ್ನರಾತ್ರಿಯ ಹೊಂಬೆಳಕಿನಲಿ
ದಿಗಂತದಿಂದ ಹೊಸ ಭರವಸೆಗಳ ಸೆರೆಹಿಡಿವ ತವಕ
ನೆನಪುಗಳಲೆಯ ಕಡಲ ಕಿನಾರೆಯಲಿ ಚಂದ ಬೆಳಕಿನಲಿ
ಮೂಡಿರುವ ಹೆಜ್ಜೆಯ ಗುರುತುಗಳ ಎಣಿಕೆಯ ಬಯಕೆ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು