ಅಸದೃಶ ಪಾಶ

ನಿನಗಾಗಿ ಎತ್ತಿಟ್ಟ ನೆನ್ನೆಗಳು
ನಿನಗೆಂದೇ ಕಾದಿರಿಸಿದ ನಾಳೆಗಳು
ಮೌನರಾಗದಲಿ ಕಂಡ ಕುರುಡು ಕನಸುಗಳು.

ಅರಳದೇ ಮುದುಡಿದ ಆಸೆಗಳೆಂಬ ಮೊಗ್ಗುಗಳು
ಅಂದು ಅರೆಘಳಿಗೆ ದೂರಾಗಿ ಚಡಪಡಿಸಿಯೂ
ಇಂದು ಬೇರಾದನಾವುಗಳು

ಪ್ರೇಮ ಮೋಹಗಳ ಮಾಯೆ ಮುದವೆಂದು ತಿಳಿದು
ಮನವ ಮೋಹಪಾಶದಿ ಬಂಧಿಸಿ ಭಿಗಿದು
ಪರಸ್ಪರ ದೂರಾದಂತೆ ಭಿಗಿ ಉರುಳಾದ ಸಮಯ

ಅಸದೃಶ ಪಾಶದ ಪಾತ್ರಕೆ
ಪ್ರೇಮವೆಂಬ ಪ್ರಾಣಪಕ್ಷಿ ಭಾವದಿಂದ ಹಾರಿದ್ದು ಹೇಯ

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು