ನಿನ್ನ ಮರೆವಾಸೆ ಚಿಗುರಿದೆ
ಪ್ರತಿಬಾರಿ ನಿನ್ನ ಚರದೂರವಾಣಿಯ ಕರೆಗಂಟೆ ರಿಂಗಣಿಸಿದಾಗಲೂ ನೀ ಉತ್ತರಿಸುವೆ ಎಂಬ ಆಶಾಭಾವ
ನನ್ನ ಪ್ರಶ್ನೆಗಳಿಗೆಲ್ಲಾ ಉತ್ತರಿಸಲು ನಿನ್ನ ನಾ ಕೇಳುತ್ತಿಲ್ಲ
ಕರೆಗಂಟೆಯ ಸದ್ದುನಿಲ್ಲಿಸಿ ಕಿವಿಗೊತ್ತಿ ಹೇಗಿದ್ದಿ ಎಂದರಷ್ಟೇಸಾಕು ಈ ಬಡ ಹೃದಯ ಮತ್ತೆ ಮಿಡಿವುದು..
ನೀ ನನ್ನ ತೊರೆದ ಆ ದಿನಗಳ ದುಃಖ ದೂರಗೊಳಿಸುವ ಬಗೆಯನೊಮ್ಮೆ ತಿಳಿಸು..
ನನಗೂ ನಿನ್ನಂತೆ ನಿನ್ನ ಮರೆವ ಆಸೆ ಈಗ ಚಿಗುರಿದೆ...
📝NPK..

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ