ಶುಭವಾಗಲಿ

ಮನೆ ಕಿರಿದಾದರೂ ಮನವಂತೂ ವಿಶಾಲವಾಗಿತೆರೆದಿತ್ತು
ನಿನಗಾಗಿ....
ವಜ್ರ ವೈಡೂರ್ಯವಿಲ್ಲದಿದ್ದರೂ ಒಲವಿನ ಹೊನ್ನರಾಶಿಯನ್ನೇ ಸುರಿಯುತಿದ್ದೆ ನಿನಗಾಗಿ....
ಸ್ವರ್ಗಸಿರಿಯ ಮಲೆನಾಡ ಮನೆ ಮಮತೆಯ ಮನಗಳು ಕಾದಿದ್ದವು
ನಿನಗಾಗಿ....
ಒಪ್ಪಿ ಅಪ್ಪಿದ್ದರೆ ನೀ ನಿನ್ನವನೇ ಆಗಿಹೋಗುತಿದ್ದೆ ನಾ ಎಂದೆಂದೂ ನಿನಗಾಗಿ...

ಇರಲಿ ಬಿಡು ಹೋಗಿಬಾ.. ಶುಭವಾಗಲಿ

✒NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು