ಚಿಂತೆ ದೂಡು ಮನವೇ

ಚಿಂತೆ ದೂಡು ಮನವೇ
ಚಿನ್ಮಯನ ಧ್ಯಾನದೊಳಿರಲು ನೀನು

ಕಾಮಕ್ರೋಧಗಳ ಸುಟ್ಟು ಲೋಭಮೋಹಗಳ ಮಡುಹಿ
ಮದ ಮಾತ್ಸರ್ಯಗಳ ಮಧಿಸು ನೀನು.

ಮಾಯೆಯನು ಮೂಡಿಪ ಮನವ ಧಿಕ್ಕರಿಸು
ಮಾಧವನ ನಾಮವನು ಸತತ ಉದ್ಗರಿಸು

ಆಸೆಗಳ ಆಮಿಷಕೆ ಹರಿಯ ಮರೆಯದಿರು
ನಿಂದನೆಯ ತಾಳದಲಿ ಹರಿಯ ಜರಿಯದಿರು

ಹರಿ ನಾಮ ಸ್ಮರಣೆ ಸಕಲ ಸುಖದಿಲಿ ಲೇಸು
ಹರಿ ಪಾದ ಸೇವೆ ಯೊಂದೆ ಮುಕುತಿ ಪಥವು
ಹರಿ ನಾಮಾಂಮೃತ ಪಾನ ಮೋದಮಯವು.

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು