ಬಂಧಮುಕ್ತರು

ಸಂಯಮದ ಸರಪಳಿಯ ಕೊಂಡಿಗಳ ಬಂಧ
ಸಂಸಾರದೆ ಸಾಮರಸ್ಯದ ಸವಿ ಸಂಬಂಧ
ಬೆಸೆದ ಬಂಧ ಬಿಡಿಸಲೆಣೆಸೆ ಸರಪಳಿ ಸಾಧ್ಯವೇ..

ಮರವು ಹುಲುಸಾಗಿ ಬೆಳೆದು ಫಲವೀಯಲು ಕಾರಣ
ಕಂಗೊಳಿಸುವ ಎಲೆ,ಟೊಂಗೆ,ಕಾಂಡಗಳೇ..
ಕಾಣದ ಬೇರಿನ ಬಾಂಧವ್ಯವೇ...? ಅಲ್ಲ
ಸರ್ವರ ಸಮಶ್ರಮದ ಪ್ರತಿಫಲದ ಫಲವೇ

ತೊರೆಯೊಂದು ಸರೋವರವ ಸೇರಿ
ನದಿಯಾಗಿ ಹರಿದು ಸಮುದ್ರವ ಸೇರಿ
ಬಂಧ ಬಂಧದಿ ಬೆಸೆದು ಕಡಲೆಂಬ ಬಂಧವಾಗೆ
ಮನುಜರು ನಾವೇಕಿಂದು ಬಡಿದಾಡಿ ಬಂಧಮುಕ್ತರು..?

✒NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು