ದೂರಾಗಿಸಿತೇಕೆ ಕುಲವು

ತಬ್ಬಿ ನನ್ನ ತೋಳಿನಿಂದ ಬಳಸುವಾಸೆ ನಿನ್ನ
ಮನವೆರಡು ಒಂದಾಗಿ ಬೆಸೆದಂತೆ ಬೆಸೆಯಲು
ಮಡಿಲಲ್ಲಿ ಮಗುವಂತೆ ಮಲಗಿರುವಾಸೆ
ಮಮತೆಯ ಮುತ್ತೊಂದ ಪಡೆಯಲು..

ಸಾಯುವ ವರೆಗೂ ಜೊತೆಗಿರುವ ಕನಸು
ಸಾಮರಸ್ಯದಿಂದ ಬದುಕುವ ಮನಸು
ನಿನ್ನೊಡನಿದ್ದ ಪ್ರತಿ ದಿನವೂ ಅದೆಷ್ಟು ಸೊಗಸು...

ಮಿಂಚಿನಂಚಿನಂತಿದ್ದ ಆ ನಿನ್ನ ಕಂಗಳ ಚಲುವು
ನನ್ನ ಮನದಿ ಮೂಡಿಸಿತ್ತು ಒಂಬದಿಯೋಲವು
ಅದು ಬಲವಾಗಲು ನಿನ್ನ ಪ್ರೇಮಬರಹದ ಸಾಲೇ ಗೆಲುವು..
ದೂರಾಗಲು ಕಾರಣವಾದುದೇಕೆ ಕುಲವು....?

✒NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು