ನಿನ್ನವನೇ ಆಗಿದ್ದ ನಿನ್ನವ

ನಿನ್ನ ಕಂಗಳ ಕಂಪಿನಲಿ ಬೆರೆಯೆ ಹವಣಿಸಿದವ
ಕಹಿಕನಸುಗಳ ಕಂಪನದಿ ಜೊತೆಗಿದ್ದವ
ಕಣ್ಣೀರಿಡುವ ಕಹಿ ಘಟನೆಗಳ ಕೊನೆಗಾಣಿಸಿದವ
ಭೋರ್ಗರೆವ ಬಿರು ಮಳೆಯಲ್ಲೂ ಬೆಚ್ಚಗಿರಿಸಿದವ

ಪ್ರತಿಕ್ಷಣವೂ ನಿನ್ನ ನಗುವೊಗವ ಕಾಣ ಹವಣಿಸಿದವ
ಕಂಗಳ ಜೀವಚಿಲುಮೆ ನೀನೆಂದುಕೊಂಡವ
ನನ್ನೂಲವ ನನಲ್ಲೇ ನುಂಗಿ ನಿನ್ನಮನವ ಸಂತೈಸಿದವ
ಬಿಟ್ಟು ಹೋಗುವಾಗಲೂ ನಗುನಗುತಲೇ ಬೀಳ್ಕೋಟ್ಟವ

                                   ಇಂತಿ
                                   ನಿನ್ನವನೇ ಆಗಿದ್ದ ನಿನ್ನವ
📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು