ರಾಧಿಕೆ

ರಾಧಿಕೆ ನಿನ್ನ ನಾಟ್ಯಕ್ಕೆ ನನ್ನ ಕೊಳಲ ಗಾನ ನ ಗಣ್ಯ
ನಾಟ್ಯನಿಧಿಯೇ.. ನವಿಲ ನಾಚಿಸುವ ನರ್ತನಾನುಭಾವವ ನೀವ
ನಿನ್ನ ಭಂಗಿಗಳ ಬಣ್ಣಿಸಲು ಭಾಷೆಯ ಭಾವವೆಟುಕದು
ಸಾಂಗತ್ಯಕೆ ನನ್ನ ಕೊಳಲ ಆಲಾಪದ ಸೇವೆಯ ಸಲ್ಲಿಸಿದಷ್ಟೂ ಸಾಲದು..

ನಲಿದುಲಿವ ಪ್ರೇಮರಾಗ ಸಂಗೀತದವ್ಯಾಪ್ತಿಯ ಮೀರಿಹುದು
ನಾಟ್ಯರಂಗದ ನಟನಾರಾಧನೆ ನಭದಗಲ ನಡೆದಿಹುದು
ಗೋಪಿಕೆಯರೊಡಗೂಡಿ ನಲಿವ ನಾಟ್ಯರಸಾನುಬವ ಗಂಧರ್ವರನೂ ನಾಚಿಸಿಹುದು..
ಇಂದು ನೀ ನನ್ನೊಳು ಮಿಳಿತಳಾಗಿ ನಮ್ಮ ಪ್ರೇಮ ಸಮ್ಮಿಳಿತ.. ನೀ ಸಂಪ್ರೀತಳಾಗುವುದಾದರೆ ಇದೋ ನಾ ನಿನಗೆ ಪರಿಪೂರ್ಣ ಅರ್ಪಿತ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು