ಆಂತರ್ಯದಿ ಬಡಗಿ

ನನ್ನ ಬೆಡಗಿಯ ರೂಪಕ್ಕೆ ನಾ ಆಂತರ್ಯದಿ ಬಡಗಿ
ಅವಳ ಪ್ರತಿರೂಪದ ಪ್ರತಿಮೆಯನು ನಾ
ಭಾವದ ಉಸಿರಲಿ ಕೆತ್ತಿದ್ದೆ
ಮಳೆಬಿಲ್ಲನು ಬಣ್ಣಕೆ ಬಳಸಿದ್ದೆ
ಹೃದಯದ ಅರಮನೆಯಲಿರಿಸಿದ್ದೆ

ಅದು ಅವಳೆದುರು ಬಂದದಿನ
ನನ್ನೆಲ್ಲ ಕಲ್ಪನೆಗಳರಳಿ ಹೂವಾಗಿ ನಿಂತ ಕ್ಷಣ
ಕನಸಿನ ಚಂದ್ರಿಕೆ ಕಾವ್ಯದ ಕನ್ನಿಕೆ ಕಣ್ಣಿಗೆ ಕಂಡ ಸುದಿನ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು